ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ. ಸ೦ಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕು ಸಂಚರಿಸುತ್ತಾ ಗದುಗಿಗೆ ಬಂದಿದೆ.ಎಲ್ಲ ಊರುಗಳಲ್ಲಿ ಉಳದುಕೊಂಡಂತೆ ಉಳಿದುಕೊಂಡಾಗ ಆಗಿನ ಕಾಲದ ಹಿರಿಯರಾದ ರಾವಬಹದ್ದುರ ಮಾನವಿಯವರು ಮಾಳೇಕೊಪ್ಪ ಮ. ೧೯೩೦ರಲ್ಲಿ ಸಮಯದಲ್ಲಿ ಬರಗಾಲ , ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯರಿಗಾಗಿ ಮುಂದೆ ಬಂದು ನೆರವು ನೀಡಿದವರು ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀದಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು. == ದಾನಿ == ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಈಗಿನ ಪಂಚಾಕ್ಷರಿ ನಗರಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟರು. == ಪೀಠಾಧಿಪತಿಗಳು == == ಪರಂಪರೆ == ಗದುಗಿನ ವೀರೇಶ್ವರ ಪುಣ್ಯಾಶ್ರಮ ಸುಮಾರು ಆರುವರೆ ದಶಕಗಳಿಂದ ಆ ನಾಮದ ಬಲದಿಂದಲೇ ಉತ್ತುಂಗ ಸ್ಥಿತಿ ಪ್ರಜ್ವಲಿಸಿತ್ತು, ಅಂಧ-ಅನಾಥರಿಗೆ ತೃಪ್ತಿ ದೊರಕಿತ್ತು. ಅಂತಹ ಚೇತನರಾಗಿದ್ದವರು ಪಂಚಾಕ್ಷರಿ ಗವಾಯಿಗಳು ಪುಟ್ಟರಾಜ ಗವಾಯಿಗಳು. ಈಗ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಸುಮಾರು ಏಳು ದಶಕಗಳ ಕಾಲ ವಿಕಲಚೇತನರ ಬಾಳಿಗೆ ಬೆಳಕಾಗಿದೆ. == ಆರಂಭ == ೧೯೩೩ ರಲ್ಲಿ ವೀರೇಶ್ವರ ಪುಣ್ಯಾಶ್ರಮ ಪ್ರಾರಂಭವಾಯಿತು. == ದಾಸೋಹ ವಸತಿ == ಅಂಧ, ಅನಾಥ, ಅಂಗವಿಕಲರಾದ ಸುಮಾರು ೬೦೦ ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ. == ಕಾರ್ಯಗಳು == ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಪಾಠ. ಭಕ್ತರಿಗೆ ಪುರಾಣ ಪಠಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ. == ವೀರೇಶ್ವರ ಪುಣ್ಯಾಶ್ರಮ ಆಸ್ತಿ == ಹಾಗೂ ಹಾನಗಲ್ ಕುಮಾರಸ್ವಾಮಿಗಳು ನೀಡಿದ ದಂಡ ಮತ್ತು ಜೋಳಿಗೆ. ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು, ಆಶ್ರಮದ ಸಾವಿರಾರು ವಿದ್ಯಾರ್ಥಿಗಳು, ಆಶ್ರಮದಲ್ಲಿ ಕಲಿತು ಹೋಗಿ ಇಂದು ನಾಡಿನ ರಾಯಭಾರಿಗಳಾಗಿರುವ ಸಂಗೀತ ದಿಗ್ಗಜರು. == ಭಕ್ತರ ಸಹಾಯ == == ರೋಟರಿ ಸಹಾಯ == == ಸರ್ಕಾರದ ಸಹಾಯ == == ಇವನ್ನೂ ನೋಡಿ == == ಚಲನಚಿತ್ರ == ಗಾನಯೋಗಿ ಪಂಚಾಕ್ಷರಿ ಗವಾಯಿ (ಚಲನಚಿತ್ರ) == ಚಿತ್ರ ಗ್ಯಾಲರಿ == ಪುಟ್ಟರಾಜ ಗವಾಯಿ ಚಿತ್ರ ಗ್ಯಾಲರಿ ಇತ್ತೀಚಿನ ವರ್ಷಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳ ಪಟ್ಟಿ ಇಂತಿದೆ.